Breaking News: ಅನ್ನಭಾಗ್ಯ ಆಗಸ್ಟ್‌ ತಿಂಗಳ ಹಣ ಬಿಡುಗಡೆ! ಇಂತಹ ಕಾರ್ಡ್‌ಗೆ ಹಣ ಬರಲ್ಲ! ಈ ಕೆಲಸ ಮಾಡುವುದು ಕಡ್ಡಾಯ

0

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ರಾಜ್ಯ ಕಾಂಗ್ರೆಸ್‌ ಸರ್ಕಾರವು ತನ್ನ 5 ಗ್ಯಾರಂಟಿಗಳಲ್ಲಿ ಪ್ರಮುಖ ಗ್ಯಾರಂಟಿಯಾದ ಅನ್ನಭಾಗ್ಯ ಯೋಜನೆಯನ್ನು ಜುಲೈ ನಲ್ಲಿ ಜಾರಿಗೆ ತಂದಿದೆ, ಈ ಯೋಜನೆಯಲ್ಲಿ 5 ಕೆಜಿ ಕೇಂದ್ರ ಸರ್ಕಾರದ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿಯನ್ನು ಕೊಡಬೇಕಾಗಿತ್ತು ಆದರೆ ಅಕ್ಕಿಯ ಕೊರತೆಇಂದ ಅಕ್ಕಿಯ ಬದಲು 5 ಕೆಜಿ ಅಕ್ಕಿಯ ಹಣವನ್ನು ರಾಜ್ಯಸರ್ಕಾರ ಪಡಿತರ ಚೀಟಿಯ ಯಾಜಮಾನಿಯ ಖಾತೆಗೆ ಹಾಕಲಾಗುತ್ತಿದೆ, ಈಗ ಆಗಸ್ಟ್‌ ತಿಂಗಳ ಹಣ ಯಾವಾಗ ಬರುತ್ತದೆ ಎಂಬ ಮಾಹಿತಿ ಲಭ್ಯವಾಗಿದ್ದು ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಮಿಸ್‌ ಮಾಡದೆ ಕೊನೆಯವರೆಗೂ ಓದಿ.

anna bhagya august month dbt payment

ವಿಧಾನಸೌಧದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವ ಕೆ ಹೆಚ್ ಮುನಿಯಪ್ಪ ನವರು ಅನ್ನಭಾಗ್ಯ ಯೋಜನೆಯಡಿ ಆಗಸ್ಟ್ ತಿಂಗಳ ಹಣ ಪಾವತಿ ಮತ್ತು ಮುಂದಿನ ದಿನಗಳಲ್ಲಿ ಅಕ್ಕಿ ವಿತರಣೆ ಕುರಿತು ಹಂಚಿಕೊಂಡಿರುವ ಮಾಹಿತಿಯನ್ನು ಸಚಿವರು ನೀಡಿದರು.

ಇದನ್ನೂ ಓದಿ: Breaking News: ಸರ್ಕಾರಿ ನೌಕರರಿಗೆ‌ ವರಮಹಾಲಕ್ಷ್ಮಿ ಹಬ್ಬದ ಬಂಪರ್ ಗಿಫ್ಟ್! DA ಹೆಚ್ಚಳ ಮಾಡಿದ ಸರ್ಕಾರ! ಎಷ್ಟು ಹೆಚ್ಚಳವಾಗಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸರಕಾರದಿಂದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆಗೆ ಅಕ್ಕಿ ಅಲಭ್ಯತೆ ಕಾರಣದಿಂದ ಜುಲೈ ತಿಂಗಳಿಂದ 5 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ ಬದಲು ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 170 ರೂ ರಂತೆ ಅರ್ಥಿಕ ಸಹಾಯಧನವನ್ನು ಪಡಿತರ ಚೀಟಿ ಮುಖ್ಯಸ್ಥರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿತ್ತು, ಇದೇ ಮಾದರಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ DBT ಮೂಲಕ ಹಣ ವರ್ಗಾವಣೆ ಮಾಡುವ ಕಾರ್ಯವನ್ನು ಆಗಸ್ಟ್‌ 25, 2023 ರಿಂದ ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರಕಾರವು ಅಕ್ಕಿ ಸಿಗದ ಕಾರಣದಿಂದಾಗಿ ರೇಷನ್‌ ಕಾರ್ಡ್‌ ಹೊಂದಿರುವವರಿಗೆ ಹಣ ನೀಡುವ ತೀರ್ಮಾನದಂತೆ ಎಲ್ಲಾ ಅರ್ಹ BPL ಕಾರ್ಡ್‌ದಾರರಿಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತದೆ. ಒಟ್ಟು 1.28 ಕೋಟಿ ಕಾರ್ಡ್ ದಾರರಲ್ಲಿ 28 ಲಕ್ಷ ಕಾರ್ಡ್‌ಗಳ ಬ್ಯಾಂಕ್‌ ಖಾತೆ ವಿವರಗಳು ಕಳೆದ ತಿಂಗಳು ಇಲಾಖೆಯಲ್ಲಿ ಲಭ್ಯವಿರಲ್ಲಿಲ್ಲ.  ಸಧ್ಯ ಇವುಗಳಲ್ಲಿ7 ಲಕ್ಷ ಕಾರ್ಡ್‌ಗಳ ಬ್ಯಾಂಕ್ ಖಾತೆ ವಿವರವನ್ನು ಸಂಗ್ರಹಿಸಲಾಗಿದ್ದು, 1.07 ಕೋಟಿ ಕುಟುಂಬಗಳಿಗೆ ಹಣ ವರ್ಗಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಗೆ ಖರೀದಿ ಪ್ರಯತ್ನ ಯಶಸ್ವಿ: 

ರಾಜ್ಯದ ಪಡಿತರ ಚೀಟಿ ಹೊಂದಿರುವರ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಪ್ರತಿ ಒಬ್ಬರಿಗೆ ತಲಾ 10 ಕಿ. ಲೋ. ಆಹಾರಧಾನ್ಯ ವಿತರಿಸಲು ಬೇಕಾಗುವ ಅಕ್ಕಿಯನ್ನು ಖರೀದಿಸುವ ಪ್ರಯತ್ನ ಯಶಸ್ವಿಯಾಗಿದೆ. ಪಕ್ಕದ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಅಕ್ಕಿ ನೀಡಲು ಒಪ್ಪಿಗೆ ಸಿಕ್ಕಿದೆ, ಆದರೆ ಎಷ್ಟು ದರಕ್ಕೆ ಖರೀದಿ ಮಾಡಬೇಕು ಎಂಬಂತೆ ಮಾತುಕತೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.

ಪಡಿತರ ವಿತರಣೆಯಲ್ಲಿ ಅಕ್ಕಿ ಜೊತೆಗೆ, ಕರ್ನಾಟಕದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಅಕ್ಕಿ ಮತ್ತು ಉತ್ತರ ಭಾಗದ ಜಿಲ್ಲೆಗಳಲ್ಲಿ ಜೋಳ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದ್ದು. ಈ ಧಾನ್ಯಗಳ ಸದ್ಬಳಕೆ ಆಗುತ್ತಿದೆಯೇ? ಹೆಚ್ಚಿನ ಬೇಡಿಕೆ ಇದೆಯೇ ಎಂಬ ಕುರಿತು ಪರಿಶೀಲಿಸಿ ವರದಿ ನೀಡಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಮಾಹಿತಿ ಬಂದ ಬಳಿಕ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ರಾಗಿ, ಜೋಳ ಖರೀದಿಗೆ ಕ್ರಮ ವಹಿಸಲಾಗುವುದು,” ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

ಹೊಸ ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ ಸದ್ಯಕ್ಕಿಲ್ಲ

ರಾಜ್ಯದಲ್ಲಿ ಸದ್ಯ ಹೊಸ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಸದ್ಯಕ್ಕೆ ಅನುಮತಿ ನೀಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಅವರು ಶುಕ್ರವಾರ ಸುದ್ದಿಗೋಷ್ಥಿಯಲ್ಲಿ ತಿಳಿಸಿದ್ದು. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ”ಪ್ರಸ್ತುತ ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಕಾರ್ಡ್ ಗಳಿದ್ದು, ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಈ ಪೈಕಿ 1.50 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 14 ಲಕ್ಷ ಎಪಿಎಲ್ ಕಾರ್ಡ್‌ಗಳಿದ್ದು, ಬಹುತೇಕ ಬಳಕೆಯಾಗುತ್ತಿಲ್ಲ. ಹೀಗಾಗಿ, ಹೊಸ ಕಾರ್ಡ್‌ಗಳನ್ನು ನೀಡುವ ಉದ್ದೇಶ ಸರ್ಕಾರಕ್ಕೆ ಸದ್ಯಕ್ಕಿಲ್ಲ” ಎಂದು ತಿಳಿಸಿದ್ದಾರೆ.

ಇತರೆ ವಿಷಯಗಳು:

Leave A Reply

Your email address will not be published.