Breaking News: ಮಳೆ ಇಲ್ಲದೆ ಕಾಂಗಾಲಾಗಿದ್ದ ರೈತರಿಗೆ ಗುಡ್‌ ನ್ಯೂಸ್!‌ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ನೀಡಲು ಮುಂದಾದ ಸರ್ಕಾರ! ಕೂಡಲೇ ಈ ಕೆಲಸ ಮಾಡಿ ಪರಿಹಾರ ಪಡೆಯಿರಿ

0

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ರಾಜ್ಯದಲ್ಲಿ ಈ ವರ್ಷ ಬಹುತೇಕ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿರುವುದರಿಂದ ಅನೇಕ ಜನ ರೈತರು ಬೆಳೆಗಳನ್ನು ತೆಗೆಯುವುದು ಮತ್ತು ದನ ಕರುಗಳನ್ನು ಮಾರುವುದನ್ನು ಮಾಡುತ್ತಿದಾರೆ ಈ ರೀತಿ ಮಾಡುವ ಮುನ್ನ ರೈತರು ಈ ಲೇಖನದಲ್ಲಿ ವಿವರಿಸಿರುವ ಕ್ರಮಗಳನ್ನು ಅನುಸರಿಸಿ ಬೆಳೆ ಬಿತ್ತನೆ ಮಾಡಲು ಮಾಡಿದ ಖರ್ಚನ್ನು ಪರಿಹಾರವಾಗಿ ಸರ್ಕಾರದಿಂದ ಪಡೆಯಬಹುದಾಗಿದೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Crop insurance compensation

ಅನೇಕ ರೈತರಿಗೆ ಈ ಮಾಹಿತಿ ಇನ್ನು ತಿಳಿದಿಲ್ಲ ಅದ್ದರಿಂದ ಈ ವಿಷಯವನ್ನು ನಿಮಗೆ ಗೊತ್ತಿರುವ ಎಲ್ಲಾ ರೈತ ಭಾಂದವರಿಗೆ ತಪ್ಪದೇ ಈ ಮಾಹಿತಿಯನ್ನು ತಿಳಿಸಿ. ಅತಿವೃಷ್ಟಿ ಮತ್ತು ಅನಾವೃಷ್ಠಿಯಿಂದ, ಅಥವಾ ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿ ಆದರೆ ರೈತರು ನೇರವಾಗಿ ಬೆಳೆ ನಾಶ ಮಾಡದೇ ಒಮ್ಮೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆ ಕಚೇರಿಯನ್ನು ಭೇಟಿ ಮಾಡಿ ಬೆಳೆ ಹಾನಿ ಅಗಿರುವುದರ ಕುರಿತು ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ಮಾಡಲು ತಿಳಿಸಿ.

ಇದನ್ನೂ ಓದಿ: ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ! ಇನ್ಮೇಲೆ ಗ್ಯಾಸ್‌ ಸಿಲಿಂಡರ್‌ ಅವಶ್ಯಕತೆ ಇಲ್ಲ! ಸರ್ಕಾರದಿಂದ ಉಚಿತ ಸೋಲಾರ್‌ ಸ್ಟೌ ಯೋಜನೆ ಜಾರಿ, ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ

ನೀವು ಬೆಳೆದಿರುವ ಬೆಳೆಗೆ ಬೆಳೆ ವಿಮಾ ಮಾಡಿದಿದ್ದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಗೆ ಸಂಬಂದಿಸಿದ ವಿಮಾ ಕಂಪನಿಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ವಿಮಾ ಪ್ರತಿನಿಧಿಯ ಮೊಬೈಲ್ ಸಂಖ್ಯೆಯನ್ನು ಪಡೆದು ನಂತರ ಅವರಿಗೆ ಕರೆ ಮಾಡಿ ನಿಮ್ಮ ಬೆಳೆ ಹಾನಿಯಾಗಿರುವುದರ ಕುರಿತು ತಿಳಿಸಿ ಕ್ಷೇತ್ರ ಭೇಟಿ ಮಾಡಲು ತಿಳಿಸಿ.

ಹೀಗೆ ರೈತರು ತಪ್ಪದೇ ಬೆಳೆ ಪರಿಹಾರ ಮತ್ತು ಬೆಳೆ ವಿಮಾ ಪಡೆಯಲು ವೈಯಕ್ತಿಕವಾಗಿ ಸಂಬಂಧಪಟ್ಟ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು ಇದರಿಂದ ನಿಮಗೆ ಅರ್ಥಿಕವಾಗಿ ನಷ್ಟಉಂಟಾಗಿರುವುದರಿಂದ ಹೊರಬರಲು ಸಾಧ್ಯವಾಗುತ್ತದೆ.

ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗೆ ನಡೆಯುತ್ತದೆ

ಇಲ್ಲಿ ರೈತರು ಮುಖ್ಯವಾಗಿ ಗಮನಿಸಬೇಕಾದುದು ಏನೆಂದರೆ, ಬೆಳೆ ಪರಿಹಾರ ಮತ್ತು ಬೆಳೆ ವಿಮಾ 2 ಬೇರೆ ಬೇರೆ ಆಗಿರುತ್ತದೆ. ಬೆಳೆ ಪರಿಹಾರವನ್ನು ಬೆಳೆ ಬೆಳೆದ ಎಲ್ಲಾ ರೈತರು ಬೆಳೆ ಹಾನಿಯಾಗಿದ್ದರೆ ಸಂಬಂಧಪಟ್ಟ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಬೆಳೆ ಪರಿಹಾರ ಪಡೆಯಬಹುದು.

ಬೆಳೆ ವಿಮಾ ವೈಯಕ್ತಿಕವಾಗಿ ಪರಿಹಾರ ಪಡೆಯಲು ರೈತರು ಬಿತ್ತನೆ ಮಾಡಿದ ನಂತರ ಅಥವಾ ಮುಂಚಿತವಾಗಿ ವಿಮೆಗೆ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ವಿಮಾ ಪಡೆಯಲು ಅರ್ಜಿ ಸಲ್ಲಿಸಬಹುದು. ಹೀಗೆ ನೀವು ಅರ್ಜಿ ಸಲ್ಲಿಸಿದರೆ ಸಂರಕ್ಷಣೆ ವೆಬ್‌ ಸೈಟ್‌ ನಲ್ಲಿ ಅಥವಾ ನಿಮ್ಮ ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ನಿಮ್ಮ ಭಾಗದ ವಿಮಾ ಕಂಪನಿಯ ಪ್ರತಿನಿಧಿ ನಂಬರ್ ಪಡೆದು ಬೆಳೆ ಹಾನಿಯಾದ ಜಮೀನನ್ನು ಇಲಾಖೆ ಅಧಿಕಾರಿ ಸಮ್ಮುಖದಲ್ಲಿ ಭೇಟಿ ಮಾಡಿಸಿ ಬೆಳೆ ವಿಮಾಗೆ ಅರ್ಜಿಸಲ್ಲಿಸಬಹುದು.

ನಿಮ್ಮ ಜಿಲ್ಲೆಯ ವಿಮಾ ಕಂಪನಿ ಯಾವುದು ಮತ್ತು ಅದರ ಸಹಾಯವಾಣಿ ಸಂಖ್ಯೆ ತಿಳಿಯುವ ವಿಧಾನ:

ಈ ಲಿಂಕ್ https://samrakshanereports.karnataka.gov.in/HomePages/frmKnowYourInsCompany.aspx ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆಗೆ ಸಂಬಂದಪಟ್ಟ ವಿಮಾ ಕಂಪನಿಯ ಹೆಸರನ್ನು ಪಡೆಯಬಹುದು.

ರಾಜ್ಯ ಸರಕಾರದ ಸಂರಕ್ಷಣೆ ಪೂರ್ಟಲ್ ನಲ್ಲಿ ಈ 080 2656 4535 ಸಹಾಯವಾಣಿಗೆ ಕರೆ ಮಾಡಿ ನಿಮ್ಮ ಜಿಲ್ಲೆಯ ವಿಮಾ ಕಂಪನಿ ಪ್ರತಿ ನಿಧಿಯ ಮೊಬೈಲ್ ಸಂಖ್ಯೆಯನ್ನು ಪಡೆಯಬಹುದು.

ಬೆಳೆ ಪರಿಹಾರ ಅರ್ಜಿ ಕುರಿತು ತಿಳಿಯುವುದು ಹೇಗೆ?

ಒಮ್ಮೆ ನೀವು ಸಲ್ಲಿಸಿದ ಬೆಳೆ ಪರಿಹಾರದ ಅರ್ಜಿಯ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಈ https://landrecords.karnataka.gov.in/PariharaPayment/ ವೆಬ್ಸೈಟ್ ಭೇಟಿ ಮಾಡಿ ಅರ್ಜಿ ಸ್ಥಿತಿ ಕುರಿತು ಸಂಪೂರ್ಣ ವಿವರವನ್ನು ಪಡೆಯಬಹುದು.

ಇತರೆ ವಿಷಯಗಳು:

Leave A Reply

Your email address will not be published.