Breaking News: ಗೃಹಲಕ್ಷ್ಮಿ ಯೋಜನೆಯ ಅಂತಿಮ ಪಟ್ಟಿ ಬಿಡುಗಡೆ! ಈ ಲಿಸ್ಟ್‌ ನಲ್ಲಿ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ ₹2000! ಕೂಡಲೇ ಹೀಗೆ ಚೆಕ್‌ ಮಾಡಿ

0

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ರಾಜ್ಯ ಸರ್ಕಾರದ ಮಹತ್ವದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಸಹ ಒಂದಾಗಿದೆ. ಈ ಯೋಜನೆಯನ್ನು ಚುನಾವಣಾ ಸಮಯದಲ್ಲಿ ಘೋಷಿಸಲಾಗಿತ್ತು, ಈ ಸರ್ಕಾರ ಹಂತ ಹಂತವಾಗಿ ತನ್ನ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ ಈಗ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್‌ 30 ರಂದು ಜಾರಿಗೆ ತರಲು ಮುಂದಾಗಿದೆ ಆದ್ದರಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಯಾರಿಗೆ ಬರಲಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂದು ತಿಳಿಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಮಿಸ್‌ ಮಾಡದೆ ಕೊನೆಯವರೆಗೂ ಓದಿ.

gruhalakshmi final list

ಗೃಹಲಕ್ಷ್ಮಿ ಯೋಜನೆಗೆ ಚಾಲನೆಯನ್ನು ನೀಡಲು ಅಂತಿಮ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಾಗಿದ್ದು ಕಾರ್ಯಕ್ರಮದ ಸಿದ್ದತೆ ವೇಗವಾಗಿ ಸಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಯಾವಾಗ ಫಲಾನುಭವಿ ಖಾತೆಗೆ ಬರಲಿದೆ ಮತ್ತು ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂದು ಇಲ್ಲಿ ವಿವರಿಸಲಾಗಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆಗೆ ಮೂರರಿಂದ ನಾಲ್ಕು ಭಾರಿ ದಿನಾಂಕ ಬದಲಾವಣೆ ಮಾಡಿ ಅಂತಿಮವಾಗಿ ಈಗ 30 ಆಗಸ್ಟ್  2023 ರಂದು ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಸರ್ಕಾರದ ಬಹು ನಿರೀಕ್ಷಿತ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದೆ.

ಈ ಹಿಂದೆ ಬೆಳಗಾವಿಯಲ್ಲಿ 27 ಆಗಸ್ಟ್  2023ರಂದು ಯೋಜನೆ ಚಾಲನೆಗೆ ದಿನಾಂಕ ಮತ್ತು ಸ್ಥಳ ನಿಗದಿಪಡಿಸಲಾಗಿತ್ತು ಅದರೆ ಸ್ಥಳ ಬದಲಾವಣೆ ಕುರಿತು ಸ್ಪಷ್ಟನೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಗಾಟನೆಗೆ ಬರಲಿರುವ ರಾಷ್ಟ್ರಿಯ ನಾಯಕರಿಗೆ ಈ ದಿನ ಬೇರೊಂದು ಕಾರ್ಯಕ್ರಮಕ್ಕೆ ಹೋಗಬೇಕಿರುವುದರಿಂದ ಬೆಂಗಳೂರಿಗೆ ಹತ್ತಿರವಿರುವ ಜಿಲ್ಲೆಯಲ್ಲಿ ಸ್ಥಳ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ? 

ಗೃಹಲಕ್ಷ್ಮೀ ಯೋಜನೆಯಡಿ ಇಲ್ಲಿಯವರೆಗೆ 1.28 ಕೋಟಿ ಕುಟುಂಬದ ಯಜಮಾನಿಯರು ನೋಂದಣಿ ಮಾಡಿಕೊಂಡಿದ್ದು ಇದರಲ್ಲಿ ಅರ್ಹ ಎಲ್ಲಾ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣವನ್ನು ನೇರವಾಗಿ ಮನೆ ಯಜಮಾನಿಯರ ಖಾತೆಗೆ ಹಾಕಲಾಗುತ್ತದೆ.

ನಿಯಮಗಳನ್ನು ಪಾಲಿಸದವರಿಗಿಲ್ಲ ಮೊದಲ ಕಂತು:

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಅರ್ಜಿ ತಿದ್ದುಪಡಿ ಅಗದಿರುವವರಿಗೆ ಹಣ ಜಮಾ ಅಗುವುದಿಲ್ಲ. ಮತ್ತು ಅರ್ಜಿ ಸಲ್ಲಿಸುವ ಸಮಯದಲ್ಲಿ ಮಂಜೂರು ಪತ್ರ ದೊರೆಯದೆ ಒಂದು ವಾರದ ನಂತರ ಮಂಜೂರು ಪತ್ರ ಡೌನ್ಲೋಡ್ ಮಾಡಿಕೊಳ್ಳಿ ಎಂದು ಬಂದು ಆಗಸ್ಟ್ 30 ಒಳಗಾಗಿ ಮಂಜೂರು ಪತ್ರ ದೊರೆಯದವರಿಗೂ ಮೊದಲ ಕಂತಿನ ಹಣ ಸಿಗುವುದಿಲ್ಲ

ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆಯ ವಿವರ ಕೊಡದೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾಹಿಸಲು ತಿಳಿಸಿ ನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದಿದರೆ ಹಣ ಜಮಾ ಅಗುವುದಿಲ್ಲ. ಈ ಮೇಲಿನ ಕಾರಣಗಳಿಂದ ಮೊದಲನೆ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಅಗುವುದನ್ನು ತಪ್ಪಿಸಿಕೊಳ್ಳಲು ಅರ್ಜಿ ಸಲ್ಲಿಸದವರು ಕೂಡಲೇ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಮಂಜೂರು ಪತ್ರ ಪಡೆಯಿರಿ.

ಅರ್ಜಿ ಸಲ್ಲಿಸಿದ ನಂತರ E-kyc ಅಗಿರುತ್ತದೆ ಮಂಜೂರು ಪತ್ರ ಡೌನ್ಲೋಡ್ ಮಾಡಲು ಒಂದು ವಾರದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಡೌನ್ಲೋಡ್ ಲಿಂಕ್ ಮೇಲೆ ಒತ್ತಿ ಮಂಜೂರು ಪತ್ರ ಬಂದಿರುವುದನ್ನು ಖಚಿತಪಡಿಸಿಕೊಳ್ಳಿ.

ಆಧಾರ್ ಲಿಂಕ್ ಆಗಿರುವ ಖಾತೆಗೆ ಹಣ ವರ್ಗಾವಣೆ ಆಯ್ಕೆಯನ್ನು ಕೊಟ್ಟಿರುವವರು ಒಮ್ಮೆ My Aadhar app ಡೌನ್ಲೋಡ್ ಮಾಡಿಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.

ಗೃಹಲಕ್ಷ್ಮಿ ಯೋಜನೆ ಅಂತಿಮ ಪಟ್ಟಿ ಬಿಡುಗಡೆ

ಗೃಹಲಕ್ಷ್ಮಿ ಯೋಜನೆಗೆ ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಪಡೆಯಲು ಈ https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ “ಹಳ್ಳಿಯ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ, ಹಳ್ಳಿ ಆಯ್ಕೆಯನ್ನು ಮಾಡಿಕೊಂಡು “GO” ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಯೋಜನೆಯ ಅರ್ಹ ಪಟ್ಟಿ ಪಡೆಯಬಹುದು.

Leave A Reply

Your email address will not be published.