Breaking News: ರೇಷನ್‌ ಕಾರ್ಡ್‌ ದಾರರಿಗೆ ಗುಡ್‌ ನ್ಯೂಸ್! ಹೆಸರು ತಿದ್ದುಪಡಿ, ಸೇರ್ಪಡೆಗೆ ಗಡುವು ವಿಸ್ತರಿಸಿದ ಸರ್ಕಾರ

0

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿಯನ್ನು ನೀಡಿದೆ, ಪಡಿತರ ಚೀಟಿ ಈಗ ಸರ್ಕಾರದ ಯಾವುದೇ ಯೋಜನೆಗೆ ಪ್ರಮುಖವಾದ ದಾಖಲೆಯಾಗಿದೆ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಸಹ ರೇಷನ್‌ ಕಾರ್ಡ್‌ ಬಹುಮುಖ್ಯವಾಗಿದೆ, ಆದ್ದರಿಂದ ಸರ್ಕಾರ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅಧಿಸೂಚನೆ ಹೊರಡಿಸಿತ್ತು ತಿದ್ದುಪಡಿ ಹೆಸರು ಸೇರ್ಪಡೆ ಮಾಡಲು ಆಗಸ್ಟ್‌ 21 ಕೊನೆಯ ದಿನವಾಗಿತ್ತು ಆದರೆ ಈಗ ದಿನಾಂಕ ಮೂಂದೂಡಿ ಸರ್ಕಾರ ಆದೇಶ ಹೊರಡಿಸಿದೆ ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಮಿಸ್‌ ಮಾಡದೆ ಕೊನೆಯವರೆಗೂ ಓದಿ.

ration card correction online date extend

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಹಿಂದೆ ಪಡಿತರ ಚೀಟಿ ತಿದ್ದುಪಡಿ ಮತ್ತು ಕುಟುಂಬದ ಯಜಮಾನಿ ಹೆಸರು ಬದಲಾವಣೆ ಮಾಡಲು ಆಗಸ್ಟ್ 21 ಕೊನೆಯ ದಿನಾಂಕ ಎಂದು ಆದೇಶ ನೀಡಲಾಗಿತ್ತು. ಆದರೆ ಈಗ ರೇಷನ್ ಕಾರ್ಡ್ ತಿದ್ದುಪಡಿ‌ ದಿನಾಂಕ ಮೂಂದೂಡಿಲಾಗಿದೆ ಅಂದರೆ ಮತ್ತೆ 10 ದಿನ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಪ್ರಕಟಣೆಯಂತೆ ಸಾರ್ವಜನಿಕರು ಪಡಿತರ ಚೀಟಿ ತಿದ್ದುಪಡಿ ಮತ್ತು ಕುಟುಂಬದ ಯಜಮಾನಿ ಬದಲಾವಣೆಗೆ ಅರ್ಜಿ ಸಲ್ಲಿಸಲು  01 ಸೆಪ್ಟಂಬರ್  ರಿಂದ 10 ಸೆಪ್ಟಂಬರ್ ರವರೆಗೆ ಅವಕಾಶ ಮಾಡಿಲಾಗಿದೆ.

ಇದನ್ನೂ ಓದಿ: ತೆರಿಗೆದಾರರಿಗೆ ಮಹತ್ವದ ಸುದ್ದಿ: ಸೆಪ್ಟಂಬರ್‌ 30 ರೊಳಗೆ ತಪ್ಪದೆ ಈ ಕೆಲಸಮಾಡಿ! ಹೊಸ ಆದೇಶ ಹೊರಡಿಸಿದ IT

ದಿನಾಂಕ ವಿಸ್ತರಣೆಗೆ ಕಾರಣಗಳು ಹೀಗಿವೆ:

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ತಿದ್ದುಪಡಿ ಮಾಡಿಸಿಕೊಳ್ಳುವುದು ಇರುವುದರಿಂದ ಈ ಹಿಂದೆ ನಿಗದಿಪಡಿಸಿದ 4 ದಿನದ ಕಾಲಾವಕಾಶದಲ್ಲಿ ಸರ್ವರ್ ಸಮಸ್ಯೆಯಿಂದ ಅನೇಕ ಜನರಿಗೆ ಇನ್ನು ಅರ್ಜಿ ಸಲ್ಲಿಸಲು ಅಗದಿರುದರಿಂದ ಮತ್ತೆ 10 ದಿನಗಳವರೆಗೆ ಕಾಲಾವಕಾಶವನ್ನು ನೀಡಲಾಗಿದೆ

ಅರ್ಜಿ ಎಲ್ಲಿ ಸಲ್ಲಿಸಬೇಕು?

ರೇಷನ್‌ ಕಾರ್ಡ್‌ ತಿದ್ದುಪಡಿ ಹಾಗೂ ಕುಟುಂಬದ ಯಾಜಮಾನಿಯ ಬದಲಾವಣೆ ಬಯಸುವವರು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ ಒನ್, CSC ಕೇಂದ್ರಕ್ಕೆ ಭೇಟಿ ಮಾಡಿ ಅರ್ಜಿ ಸಲ್ಲಿಸಹುದು.

ನೀವು ಸಲ್ಲಿಸಿದ ಅರ್ಜಿಯನ್ನು ಚೆಕ್ ಮಾಡುವ ವಿಧಾನ ಹೇಗೆ?

ಹಂತ-1: ಅರ್ಜಿದಾರರು ತಮ್ಮ ಅರ್ಜಿಯ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ಲಿಂಕ್ https://ahara.kar.nic.in/lpg/ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ಜಾಲತಾಣ ಭೇಟಿ ಮಾಡಬೇಕು.

ಹಂತ-2: ನಂತರ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ “ಪಡಿತರ ಚೀಟಿಯ ಬದಲಾವಣೆ ಕೋರಿಕೆಯ ಸ್ಥಿತಿ” ಕ್ಲಿಕ್ ಮಾಡಿ “Ration card number”  ಮತ್ತು “Acknowledgement No”(ಅರ್ಜಿಯ ಸ್ವೀಕೃತಿ ಸಂಖ್ಯೆ) ಹಾಕಿ “GO” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಯಶ್ವಿಸಿಯಾಗಿ ಸಲ್ಲಿಕೆ ಆಗಿದಿಯೋ ಇಲ್ಲವೋ? ಎಂದು ನಿಮ್ಮ ಅರ್ಜಿಯ ಸ್ಥಿತಿ ಪರಿಶೀಲನೆ ಮಾಡಿಕೊಳ್ಳಬವುದು. 

ಸೂಚನೆ: ಈ ವೆಬ್‌ ಸೈಟ್ ಬೆಳಗ್ಗೆ 8-00 ರಿಂದ ರಾತ್ರಿ 8-00 ಗಂಟೆಯ ವರೆಗೆ ಮಾತ್ರ ತೆರೆದಿರುತ್ತದೆ. ಇದನ್ನು ಹೊರತುಪಡಿಸಿ ಬಾಕಿ ಸಮಯದಲ್ಲಿ ಸ್ಥಗಿತಗೊಳಿಸಲಾಗಿರುತ್ತದೆ.

ಇತರೆ ವಿಷಯಗಳು:

Leave A Reply

Your email address will not be published.