ಇದೀಗ ಬಂದ ಸುದ್ದಿ: ರೇಷನ್‌ ಕಾರ್ಡ್‌ ದಾರರಿಗೆ ಮಹತ್ವದ ಆದೇಶ! E-KYC ಮಾಡಲು ಆಗಸ್ಟ್‌ 31 ಲಾಸ್ಟ್‌ ಡೇಟ್! ಮಿಸ್‌ ಮಾಡಿದ್ರೆ ನಿಮ್ಮ ಪಡಿತರ ಚೀಟಿ ಬಂದ್‌

0

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಪಡಿತರ ಚೀಟಿ ಹೊಂದಿರುವ ರಾಜ್ಯದ ಎಲ್ಲಾ ಫಲಾನುಭವಿಗಳು ಇ-ಕೆವೈಸಿ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿತ್ತು ಈಗ ಇಲ್ಲಿಯವರೆಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಆಗಸ್ಟ್‌ 31, 2023 ಕ್ಕೆ ಸರ್ಕಾರ ಕಡೆಯದಾಗಿ ದಿನಾಂಕ ವಿಸ್ತರಣೆಯನ್ನು ಮಾಡಿದೆ. ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Ration card ekyc

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ರೇಷನ್ ಕಾರ್ಡ್‌ ಗೆ ಅತೀ ಹೆಚ್ಚು ಪ್ರಾಮುಖ್ಯತೆ ದೊರೆತಿದ್ದು ಇದಕ್ಕಾಗಿ ಆಹಾರ ಇಲಾಖೆಯಿಂದ ನೈಜ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಸಿಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಪಡಿತರ ಚೀಟಿ ಹೊಂದಿರುವವರು E-KYC ಮಾಡಿಕೊಳ್ಳುವುದು ಕಡ್ಡಾಯ.

ಇದನ್ನೂಓದಿ: Breaking News: ಇ-ಶ್ರಮ್‌ ಕಾರ್ಡ್‌ ಹೊಂದಿರುವ ಕಾರ್ಮಿಕರಿಗೆ ಪ್ರತಿ ತಿಂಗಳು ಖಾತೆಗೆ ₹1500 ? ಯಾವುದು ಈ ಯೋಜನೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಇ-ಕೆವೈಸಿ ಕುರಿತು ಹೊರಡಿಸಿರುವ ಆದೇಶದ ಹೀಗಿದೆ:

  1. ದಿನಾಂಕ: 11.08.2023 ರ ಸಭೆಯಲ್ಲಿ ಸೂಚಿಸಿರುವಂತೆ ಇ-ಕೆವೈಸಿ ಆಗದೇ ಇರುವ ಪಡಿತರ ಚೀಟಿದಾರರಿಗೆ ದಿನಾಂಕ: 31.08.2023 ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವ ಬಗ್ಗೆ ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ. ಜಿಲ್ಲೆಗಳ ಜಂಟಿ/ಉಪ ನಿರ್ದೇಶಕರು ಇ-ಕೆವೈಸಿ ಆಗದ ಪಡಿತರ ಚೀಟಿದಾರರ ಹೆಸರುಗಳನ್ನು, ಆಯಾ ನ್ಯಾಯಬೆಲೆ ಮುಂದೆ ಪ್ರದರ್ಶಿಸತಕ್ಕದು.
  2. ವಿನಾಯಿತಿ ನೀಡಲಾಗಿರುವ ಪಡಿತರ ಚೀಟಿಯಲ್ಲಿ ಬೆರಳಚ್ಚು, ಪಡೆಯಲು ಆಗದೇ ಇರುವ ಪಡಿತರ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಅಮಾನತ್ತು ಪಡಿಸದೇ, ಸದರಿ ಫಲಾನಭವಿಗಳಿಂದ ಪುನಃ ಬೆರಳಚ್ಚು ಪಡೆಯಲು ಪ್ರಯತ್ನಿಸತಕ್ಕದ್ದು, ಇಲ್ಲದಿದ್ದಲ್ಲಿ IRIS ತಂತ್ರಾಂಶವನ್ನು ಆಹಾರ ತಂತ್ರಾಂಶದೊಂದಿಗೆ ಜೋಡಣೆಯಾಗುವವರೆಗೆ ಕಾಯತಕ್ಕದ್ದು.
  3. ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಸಂಗ್ರಹಣೆಯನ್ನು ದಿನಾಂಕ: 31.08.2023 ರೊಳಗಾಗಿ ಪೂರ್ಣಗೊಳಿಸದೆ ಇದ್ದಲ್ಲಿ ಅಂತಹ ಪಡಿತರ ಚೀಟಿಗಳ ಸದಸ್ಯರುಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸಲಾಗುವುದು ಮತ್ತು ಈ ಫಲಾನುಭವಿಗಳಿಗೆ ಆಹಾರ ಧಾನ್ಯ ಮತ್ತು DBT ನಗದು ಸೌಲಭ್ಯವನ್ನು ಸೆಪ್ಟೆಂಬರ್-2023 ನೇ ಮಾಹೆಯಿಂದ ಸ್ಥಗಿತಗೊಳಿಸಲಾಗುವುದು. (ವಿನಾಯಿತಿ ನೀಡಲಾದ ಪಡಿತರ ಚೀಟಿಗಳನ್ನು ಹೊರತುಪಡಿಸಿ) ಈ ರೀತಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಕಾರಣದಿಂದಾಗಿ ಇಲ್ಲಿಯವರೆಗೆ ಇ-ಕೆವೈಸಿ ಮಾಡಿಕೊಳ್ಳದವರು ತಪ್ಪದೇ 31 ಆಗಸ್ಟ್ ಒಳಗೆ ಈ ಕೆಲಸ ಮಾಡಿ.

ಇ-ಕೆವೈಸಿ ಎಲ್ಲಿ ಮಾಡಿಸಬೇಕು?

ರೇಷನ್ ಕಾರ್ಡ್ ಹೊಂದಿರುವವರು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯನ್ನು ಭೇಟಿ ನೀಡಿ ಇ-ಕೆವೈಸಿ ಮಾಡಿಸಬೇಕು. ಈ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಅಗಿರುವ ಮೊಬೈಲ್ ಸಂಖ್ಯೆಯ ಮೊಬೈಲ್ ಅನ್ನು ತೆಗೆದುಕೊಂಡು ಹೋಗಬೇಕು

ಎಲ್ಲಾ ಸದಸ್ಯರ ಇ-ಕೆವೈಸಿ ಕಡ್ಡಾಯ:

ರೇಷನ್ ಕಾರ್ಡ್‌ ನ ಎಲ್ಲಾ ಸದಸ್ಯರ E-KYCಯನ್ನು ತಪ್ಪದೇ ಮಾಡಿಸಿ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್‌ ನಲ್ಲಿ 4 ಜನ ಸದಸ್ಯರಿದ್ದು ಅದರಲ್ಲಿ 1 ಸದಸ್ಯನ ಇ-ಕೆವೈಸಿ ಮಾಡಿಸದೇ ಇದ್ದಲಿ ಆ ಸದಸ್ಯರ ರೇಷನ್ ಕಾರ್ಡ್‌ ಸದಸ್ಯತ್ವ ರದ್ದಾಗುತ್ತದೆ ಅದ್ದರಿಂದ ರೇಷನ್ ಕಾರ್ಡ್‌ ನ ಎಲ್ಲಾ ಸದಸ್ಯರ ಇ-ಕೆವೈಸಿ ಕಡ್ಡಾಯವಾಗಿರುತ್ತದೆ.

ನಿಮ್ಮ ಪಡಿತರ ಚೀಟಿ ಈಗಾಗಲೇ ಇ-ಕೆವೈಸಿ ಅಗಿರುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ಹಂತ-1: ಪಡಿತರ ಚೀಟಿ ಹೊಂದಿರುವವರು ನಿಮ್ಮ ರೇಷನ್ ಕಾರ್ಡ್‌ ನಲ್ಲಿ ಎಷ್ಟು ಸದಸ್ಯರ ಇ-ಕೆವೈಸಿ ಅಗಿದೆ? ಯಾರದ್ದು ಇನ್ನು ಅಗಿಲ್ಲ ಎಂದು ತಿಳಿಯಲು ಮೊದಲಿಗೆ ಈ ಲಿಂಕ್ https://ahara.kar.nic.in/lpg/ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಜಾಲತಾಣ ಭೇಟಿ ಮಾಡಬೇಕು.

ಹಂತ-2: ನಂತರ ನಿಮ್ಮ ಜಿಲ್ಲೆಯ ಲಿಂಕ್  ಮೇಲೆ ಕ್ಲಿಕ್ ಮಾಡಿ, “ಪಡಿತರ ಚೀಟಿ ವಿವರ” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು. ಇದಾದ ನಂತರ “With OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ ಸದಸ್ಯರ ಹೆಸರನ್ನು ಆಯ್ಕೆ ಮಾಡಿಕೊಂಡು “Go” ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ನೊಂದಾಯಿತ ಮೊಬೈಲ್ ಸಂಖ್ಯೆಗೆ‌ OTP ಬರುತ್ತದೆ, ಬಂದಿರುವ 6 ಅಂಕಿಯ “OTP” ಯನ್ನು ನಮೂದಿಸಿ ಮತ್ತೆ “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರೇಷನ್ ಕಾರ್ಡ್‌ ವಿವರ ನಿಮಗೆ ತಿಳಿಯುತ್ತದೆ.

ಹಂತ-3: ಇಲ್ಲಿ ನಿಮ್ಮ ರೇಷನ್ ಕಾರ್ಡ್‌ ನಲ್ಲಿ ಒಟ್ಟು ಎಷ್ಟು ಜನ ಸದಸ್ಯರಿದ್ದಾರೆ ಅವರ ಹೆಸರು ಮತ್ತು ಇದರ ಮುಂದಿನ “E-KYC Status” ಕಾಲಂ ನಲ್ಲಿ ಸದಸ್ಯರ ಹೆಸರಿನ ಮುಂದೆ “Yes” ಎಂದು ನಮೂದಿಸಿದ್ದರೆ ಆ ಸದಸ್ಯರ ಇ-ಕೆವೈಸಿ ಅಗಿದೆ ಎಂದು ತಿಳಿಯಬೇಕು. ಒಂದೊಮ್ಮೆ “NO” ಎಂದು ನಮೂದಿಸಿದ್ದರೆ ಅವರ ಇ-ಕೆವೈಸಿ ಅಗಿಲ್ಲ ಎಂದು.

ಇತರೆ ವಿಷಯಗಳು:

Leave A Reply

Your email address will not be published.