Breaking News: ತೊಗರಿ ಬೆಳೆಗಾರರಿಗೆ ಬಂಪರ್‌! ಧೀಡಿರನೆ ಏರಿಕೆಯಾದ ತೊಗರಿ ಬೆಲೆ! ಗ್ರಾಹಕರಿಗೆ ಬೆಲೆ ಏರಿಕೆ ಶಾಕ್!‌ ಇಲ್ಲಿದೆ ಸಂಪೂರ್ಣ ಮಾಹಿತಿ

0

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ನೆಟೆ ರೋಗದಿಂದಾಗಿ ತೊಗರಿ ಬೆಳೆ ಬಹಳ ಕುಸಿದಿದೆ, ಮಾರುಕಟ್ಟೆಗೆ ತೊಗರಿ ಬರುವುದು ಕಡಿಮೆಯಾಗಿದೆ. ಇದರ ಕಾರಣದಿಂದಾಗಿ ತೊಗರಿ ಬೆಲೆ ದಿನದಿಂದ ದಿನಕ್ಕೆ ಭಾರಿ ಏರುತ್ತಿದೆ. ಇದರಿಂದ ತೊಗರಿ ಬೆಳೆದ ರೈತರಿಗೆ ಬಹಳ ಲಾಭವಾಗಿದ್ದು ಗ್ರಾಹಕರಿಗೆ ತೊಗರಿ ಬೆಲೆ ಏರಿಕೆಯ ಶಾಕ್‌ ತಗುಲಲಿದೆ ಎಷ್ಟು ಬೆಲೆ ಏರಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನುಮಿಸ್‌ ಮಾಡದೆ ಕೊನೆಯವರೆಗೂ ಓದಿ.

Togari price increase

ಒಂದು ತಿಂಗಳ ಹಿಂದೆ ತೋಗರಿ ಬೆಲೆಯು ಕ್ವಿಂಟಲ್‌ಗೆ ₹10 ಸಾವಿರದ ಆಸುಪಾಸಿನಲ್ಲಿತ್ತು. ತದನಂತರ ಬೆಲೆ ಹೆಚ್ಚುತ್ತ ಸಾಗಿದೆ. ವಾರದಿಂದ ಸರಾಸರಿ ₹11,600ಕ್ಕೆ ತೊಗರಿ ಮಾರಾಟವಾಗುತ್ತಿತ್ತು. ಆದರೆ ಭಾನುವಾರ 1 ಕ್ವಿಂಟಲ್‌ಗೆ ₹12,100ರವರೆಗೆ ಮಾರಾಟವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 1,244 ಕ್ವಿಂಟಲ್‌ ತೊಗರಿ ಆವಕವಾಗಿದೆ ಎಂದು APMC ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.

ಕಲಬುರಗಿ ತೊಗರಿಗೆ ಹೆಚ್ಚು ಬೇಡಿಕೆ:

ಉತ್ತರ ಕರ್ನಾಟಕದ ವಿವಿಧೆಡೆ ತೊಗರಿ ಬೆಳೆಯಲಾಗುತ್ತದೆ. ಕಲಬುರಗಿಯಲ್ಲಿ ಸುಣ್ಣದ ಕಲ್ಲುಗಳು ಇರುವ ಜಮೀನಿನಲ್ಲಿ ತೊಗರಿ ಬೆಳೆಯುವುದರಿಂದ ಕ್ಯಾಲ್ಸಿಯಂ ಪ್ರಮಾಣ ತೊಗರಿಯಲ್ಲಿ ಯತ್ತೆಚ್ಚವಾಗಿರುತ್ತದೆ. ಹೀಗಾಗಿ, ಹೆಚ್ಚಾಗಿರುವ ಕ್ಯಾಲ್ಸಿಯಂ ಜೊತೆಗೆ ಹೆಚ್ಚು ರುಚಿಕರವೂ ಆಗಿರುವುದರಿಂದ ಇಲ್ಲಿನ ತೊಗರಿಯನ್ನು ತಮಿಳುನಾಡು ಹಾಗೂ ಗುಜರಾತ್‌ಗ ರಾಜ್ಯಗಳಿಗೆ ರವಾನೆಮಾಡಲಾಗುತ್ತದೆ. ತೊಗರಿಗೆ ಭೌಗೋಳಿಕ ವೈಶಿಷ್ಟ್ಯ (IG) ಮಾನ್ಯತೆ ಸಿಕ್ಕಿರುವುದರಿಂದ ಬೇಡಿಕೆ ಹೆಚ್ಚಿದ್ದು, ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ‘ಭೀಮಾ ಪಲ್ಸ್’ ಹೆಸರಿನಲ್ಲಿ ತೊಗರಿ ಮಾರಾಟ ಮಾಡಲು ಯೋಜನೆ ರೂಪಿಸಿದೆ.

ಇದನ್ನೂಓದಿ: Breaking News: ಉದ್ಯೋಗಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ಆದಾಯ ತೆರಿಗೆ ಇಲಾಖೆ! ಹೊಸ ನಿಯಮ ಜಾರಿ! ಇನ್ಮೇಲೆ ಸಂಬಳದಲ್ಲಿ ಭಾರಿ ಹೆಚ್ಚಳ

ಉತ್ಪಾದನೆಯಲ್ಲಿ ಕುಸಿತ:

ಕಳೆದ ವರ್ಷ ತೊಗರಿ ಬೆಳೆಗೆ ನೆಟೆರೋಗ ತಗುಲಿದ್ದರಿಂದ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಪ್ರಮಾಣದ ತೊಗರಿ ಸಿಗುತ್ತಿಲ್ಲ. ಇದು ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ವರ್ತಕರು.

2022ರಲ್ಲಿ 4.87 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು. ನೆಟೆ ರೋಗ ಹಾಗೂ ಅತಿವೃಷ್ಟಿಯಿಂದಾಗಿ 2.5 ಲಕ್ಷ ಹೆಕ್ಟೇರ್‌ನಲ್ಲಿನ ತೊಗರಿ ಬೆಳೆಗೆ ಹಾನಿಯಾಗಿತ್ತು. ಸರಾಸರಿ 50 ಲಕ್ಷ ಕ್ವಿಂಟಲ್‌ ತೊಗರಿ ಉತ್ಪಾದನೆ ಆಗಬೇಕಿತ್ತು. ಆದರೆ, ಅಂದಾಜು 33 ಲಕ್ಷ ಕ್ವಿಂಟಲ್ ಮಾತ್ರ ತೊಗರಿ ಇಳುವರಿ ಬಂದಿದೆ. ಹೀಗಾಗಿ, ಸಹಜವಾಗಿಯೇ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಿದೆ’ ಎಂದು ಕೃಷಿ ಅಧಿಕಾರಿಗಳು ಹೇಳಿದ್ದಾರೆ.

ಇತರೆ ವಿಷಯಗಳು:

Leave A Reply

Your email address will not be published.